Monday 30 December 2013

ಯಕ್ಷಗಾನ ಜೋಡಾಟ

ಯಕ್ಷಗಾನದ ತವರು ಜಿಲ್ಲೆಗಳಲ್ಲೊ೦ದಾದ ಉಡುಪಿಯಲ್ಲಿ ದಿ. ೨೯-೧೨-೨೦೧೩ ರ೦ದು ಶ್ರೀ ಸೋದೆ ಮಠದ ವತಿಯಿ೦ದ ಪ್ರಚಂಡ ಯಕ್ಷಗಾನ ಜೋಡಾಟ ನೆರವೇರಲ್ಪಟ್ಟಿತು. ರಾಜಾಂಗಣದಲ್ಲಿ ಯಕ್ಷ ರಾಜ ಕುಮಾರರ ಧೀಂಗಿಣವನ್ನು ನೋಡುವುದೇ ಕಣ್ಣಿಗೊಂದು ಹಬ್ಬ !. ಹಿಮ್ಮೇಳದಲ್ಲಿ ಬಲಿಪ ಪ್ರಸಾದ ಭಾಗವತ, ಸಿರಿಬಾಗಿಲು ರಾಮಕೃಷ್ಣ ಮಯ್ಯ , ತೆಂಕಬೈಲು  ಮುರಳೀಕೃಷ್ಣ ಶಾಸ್ತ್ರಿ , ಹೊಸಮೂಲೆ ಗಣೇಶ್ ಭಟ್ , ದೇಲಂತಮಜಲು ಸುಬ್ರಹ್ಮಣ್ಯ ಭಟ್ , ಚೈತನ್ಯ ಪದ್ಯಾಣ ಮುಂತಾದವರು ಮಿಂಚಿದರೆ , ಮುಮ್ಮೇಳದಲ್ಲಿ ಜಗದಾಭಿರಾಮ ಪಡುಬಿದ್ರಿ , ಸಂತೋಷ್ ಕುಲಶೇಖರ , ಅಶ್ವಥ್ ಮೂಡಬಿದ್ರಿ, ದೀಪಕ್ ರಾವ್ ಪೇಜಾವರ , ಶಂಭಯ್ಯ ಕಂಜರ್ಪಣೆ , ರಾಮಕೃಷ್ಣ ನಂದಿಕೂರು , ಗಣಾಧಿರಾಜ ಉಪಾಧ್ಯಾಯ ಮುಂತಾದ ಖ್ಯಾತನಾಮರು ಕಲಾ ರಸಿಕರನ್ನು ರಂಜಿಸಿದರು . ತೆಂಕುತಿಟ್ಟು ಕಲಾ ಪ್ರಕಾರದ ಈ ಜೋಡಾಟದಲ್ಲಿ 'ಮಹಿಷಾಸುರ ಮರ್ದಿನೀ' ಮತ್ತು 'ಕದಂಬ ವನವಾಸಿನಿ' ಎಂಬ ಎರಡು ಪ್ರಸಂಗಗಳನ್ನು ಆಡಿಸಿ ತೋರಿಸಲಾಯಿತು .

ಈ ಸಂಧರ್ಭ ದಲ್ಲಿ ತೆಗೆದ ಕೆಲಚಿತ್ರಗಳು ನಿಮಗಾಗಿ :












6 comments:

  1. ಛಾಯಾಚಿತ್ರ ಬಹಳ ಚ್ಗೆನ್ನಾಗಿ ಮೂಡಿ ಬ೦ದಿದೆ..ಸ೦ಧರ್ಭಕ್ಕೆ ತಕ್ಕ ಹಾಗೆ ಮತ್ತು ಬೆಳಕನ್ನು ಉತ್ತಮವಾಗಿ ಬಳಸಿಕೊ೦ಡು ತೆಗೆದಹಾಗಿದೆ...ಕೊನೆಯ ಎರಡು ಮತ್ತು ಮೊದಲ ಛಾಯಾಚಿತ್ರಗಳು ಡಿ.ಎಸ್.ಎಲ್.ಆರ್ ಗೆ ಸೆಡ್ಡು ಹೊಡೆದ೦ತಿದೆ..

    ReplyDelete